Home

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011


                                ಏಪ್ರಿಲ್ 2 ರಿಂದ ರಾಜ್ಯಾದ್ಯಂತ ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯಿದೆ-2011 ಜಾರಿಗೆ ಬರಲಿದೆ. ದಿನಾಂಕ: 02/04/2012 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಡಿ.ವಿ.ಸದಾನಂದಗೌಡ ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚಾಲನೆ ನೀಡುವರು.

ಹೆಚ್ಚಿನ ಮಾಹಿತಿಗೆ ಸಕಾಲ - ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯಿದೆ - 2011



ಸನ್ಮಾನ್ಯ ಮುಖ್ಯಮಂತ್ರಿಗಳು ವಿಜಯಪುರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಪುರಸಭಾ ವತಿಯಿಂದ  ಪೌರ ಸನ್ಮಾನ ಮಾಡಲಾಯಿತು ಪೌರಸನ್ಮಾದ   Photo Clips


ವಿಜಯಪುರ ವ್ಯಾಪ್ತಿಯ ಸಾರ್ವಜನಿಕರು ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದ ದೂರುಗಳ ನಿವಾರಣೆಗೆ ಶ್ರೀ. ಗೋಪಾಲಕೃಷ್ಣ, ಸಹಾಯಕ ಅಭಿಯಂತರರು,  ಮೋಬೈಲ್ ಸಂಖ್ಯೆ 9448312088  ರವರನ್ನು ಸಂಪರ್ಕಿಸಬಹುದಾಗಿದೆ.

ವಿಜಯಪುರ ಪಟ್ಟಣದ ಸಾಮಾನ್ಯ ಮಾಹಿತಿ

 ವಿಜಯಪುರ ಪುರಸಭೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಲಿ ತಾಲ್ಲೂಕಿಗೆ ಸೇರಿರುತ್ತದೆ. ವಿಜಯಪುರ ಪಟ್ಟಣವು ಹೋಬಳಿ ಕೇಂದ್ರವಾಗಿದ್ದು, ದಿನಾಂಕ:14/09/1917 ರಿಂದ ಪುರಸಭೆಯಾಗಿ ಆಡಳಿತ ನಡೆಸಿಕೊಂಡು ಬಂದು ನಾಗರೀಕರಿಗೆ ಉತ್ತಮ ಸೇವೆ ಒದಗಿಸಿಕೊಂಡು ಬಂದಿರುವುದರಿಂದ ಕರ್ನಾಟಕ ಸರ್ಕಾರ ಉತ್ತಮ ಪುರಸಭೆ ಎಂದು 1986-87 ಮತ್ತು 1994-95 ರಲ್ಲಿ ಎರಡು ಬಾರಿ  ಪ್ರಶಸ್ತಿಯನ್ನು ನೀಡಿದೆ. ವಿಜಯಪುರ ವೇದಗಾನಪುರಿ ಎಂದು ಹೆಸರಾಗಿತ್ತು. ಇಲ್ಲಿನ ಜನರು ವೇದಗಳನ್ನು ಹಾಡುವುದರಲ್ಲಿ ಮತ್ತು ಹತ್ತಿ ಮತ್ತು ರೇಷ್ಮೆ ವ್ಯಾಪಾರ ಮಾಡುವುದರಲ್ಲಿ ಪ್ರಸಿದ್ದಿ ಹೊಂದಿದ್ದು. ವಿಜಯಪುರವು " ವಡಿಗಪ್ಪನಾಯಕ " ರಿಂದ ಆಳಲ್ಪಟ್ಟಿದ್ದರಿಂದ ವಡಿಗೇನಹಳ್ಳಿ ಎಂದು ಹೆಸರಾಗಿತ್ತು. ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಹೋರಾಟಗಾರರಾದ ವೈ.ಎಂ. ಗವಿಯಪ್ಪರವರು ಈ ಪಟ್ಟಣಕ್ಕೆ ವಿಜಯಪುರ ಎಂದು ನಾಮಕರಣ ಮಾಡಿದರು. ಈ ಪಟ್ಟಣವು ದೇವಾಲಯಗಳಿಗೆ ಹೆಸರಾದುದರಿಂದ " ದೇವಾಲಯಗಳ ನಗರ " ಎಂದು ಸಹ ಕರೆಯುತ್ತಾರೆ. ವಿಜಯಪುರ ಪುರಸಭೆಯ ವಿಸ್ತೀರ್ಣ 16 ಚ. ಕಿ.ಮೀ ಇದ್ದು 2001 ರ ಜನಗಣತಿಯ ಪ್ರಕಾರ 29540 ಜನಸಂಖ್ಯೆ ಇರುತ್ತದೆ. ಈಗಿನ ಜನಸಂಖ್ಯೆ 35000 ಇರುತ್ತದೆ. ವಿಜಯಪುರ ಪಟ್ಟಣಕ್ಕೆ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿದ್ದು ಜನ ನಿಬೀಡ ಪ್ರದೇಶವಾಗಿರುತ್ತದೆ. ಉತ್ತಮ ರಸ್ತೆ ಸಂರ್ಕ ಇದ್ದು ರೇಷ್ಮೆ ವ್ಯಾಪಾರದ ಕೇಂದ್ರ ಸ್ಥಾನವಾಗಿದೆ. ವಿಜಯಪುರ ಪುರಸಭೆಯು 23 ವಾರ್ಡ್‌ಗಳಿದ್ದು 23 ಸದಸ್ಯರುಗಳನ್ನು ಹೊಂದಿದ್ದು 5 ನಾಮಿನಿ ಸದಸ್ಯರುಗಳನ್ನು ಸಹ ಹೊಂದಿದೆ.

Vijayapura Town Municipal was established in year 1917. Govt. of Karnataka has awarded certificate of appreciation to Vijayapura TMC in the year 1986-87 and 1994-95 for providing better basic amenities. Vijayapura is situated along Bangalore-Hyderabad National highway at a distance of 10Kms. It has a population of 29540 according to 2001 census.Now it has 35000 population. TMC has 23 elected Members and also 5 nominated Members. Vijayapura stretches to an area of 16 Sq.Kms.


 ಗಣಕೀಕರಣ ವಿಜಯಪುರ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1997 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. 

Computerisation : Properties within Vijayapura TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1997. Citizens can make use of this facility to register & obtain Birth & Death Certificates


This Page is Maintained by M.R.Manjunath, Chief Officer - 9845420010

 

 

 

 

 

 

No. Of Visitors :
Last Updated   : 16/05/2012  Release History
Release 2.0.0, Powered By Karnataka Municipal Data Society & maintained by Vijayapura TMC
This website can best viewed with the resolution 1024 * 768 using Internet Explorer 7.0 or above.
Valid CSS!